Sudha chandran biography in kannada language indian
ಸುಧಾ ಚಂದ್ರನ್
ಸುಧಾ ಚಂದ್ರನ್ | |
---|---|
Born | ೨೭ ಸಪ್ಟೆಂಬರ್ ೧೯೬೫ ಭಾರತ |
Occupation(s) | ಭರತನಾಟ್ಯ ನೃತ್ಯ ಕಲಾವಿದೆ , ನಟಿ |
Years active | ೧೯೮೪ – |
Spouse | ರವಿ ದಂಗ್ |
Parent | ಕೆ.ಡಿ.ಚಂದ್ರನ್ |
ಸುಧಾ ಚಂದ್ರನ್ ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ .
ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು . ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು. ಸುಧಾ ರವರು ಕಾಹಿನ್ ಕಿಸ್ಸಿ ರೋಜ್ ನಲ್ಲಿ ರಾಮೋಲಾ ಸಿಕಂದ್ , ನಾಗಿನ್ ೧ ಮತ್ತು ನಾಗಿನ್ ೨ ನಲ್ಲಿ ಯಾಮಿನಿ ಸಿಂಗ್ ರಹೇಜಾ , ದೈವಂ ತಂದ ವೀಡು ನಲ್ಲಿ ಚಿತ್ರಾದೇವಿ ಹಮ್ ಪಾಂಚ್ ( ೨ ) ನಲ್ಲಿ ಆನಂದ ನ ಮೊದಲನೆಯ ಹೆಂಡತಿಯಾಗಿ , ಪರ್ದೇಸ್ ಮೆ ಹೆ ಮೇರಾ ದಿಲ್ ನಲ್ಲಿ ಹರ್ಜೀತ್ ಖುರಾನ , ಯೆ ಹೆ ಮೊಹೋಬತೆ ನಲ್ಲಿ ಸುಧಾ ಶ್ರೀವಾತ್ಸವ್ ಎಂಬ ಪಾತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.[೧]
ಜನನ , ಆರಂಭಿಕ ಜೀವನ
[ಬದಲಾಯಿಸಿ]ಸುಧಾ ಚಂದ್ರನ್ ರವರು ೨೭ ಸೆಪ್ಟೆಂಬರ್ ೧೯೬೫ ರಂದು ಮುಂಬೈ ನಲ್ಲಿ ತಮಿಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು.[೨] ನೆಟ್ವುವಿನ ಸಂದರ್ಶನವೊಂದರಲ್ಲಿ, ಅವರು ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಿ ಎಂದು ಹೇಳಿದ್ದರು, ಆದರೆ ಆಕೆಯ ಕುಟುಂಬವು ತಮಿಳುನಾಡಿನ ತಿರುಚಿರಪಳ್ಳಿಯ ವಯಾಲೂರ್ ನವರು.
ಅವರ ತಂದೆ ಕೆ.ಡಿ.ಚಂದ್ರನ್, ಯುಎಸ್ಎ ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮಾಜಿ ನಟ. ಸುಧಾ ಚಂದ್ರನ್ ತನ್ನ ಬಿ.ಎ.[೩] ಪದವಿಯನ್ನು ಮುಂಬೈನ ಮಿಥಿಬಾಯ್ ಕಾಲೇಜಿನಿಂದ ಹಾಗೂ ತನ್ನ ಎಂ.ಎ ಪದವಿಯನ್ನು ಅದೇ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.[೪]
ಅಪಘಾತವಾದ ಸಂದರ್ಭ
[ಬದಲಾಯಿಸಿ]ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ಮಧ್ಯ ರಾತ್ರಿ ಆಕೆ ತೆರಳುತ್ತಿದ್ದ ಬಸ್ ತೀರ್ವ ಅಪಘಾತಕ್ಕೆ ಸಿಲುಕಿತ್ತು .
ಸುಧಾ ಅವರು ಚಾಲಕನ ಹಿಂಬದಿಯ ಸೀಟಿನಲ್ಲಿ ಕುಳಿತ್ತಿದ್ದರಿಂದ ಅಪಘಾತಕ್ಕೆ ಬಲಿಯಾದರು . ಅಪಘಾತದ ಸಂದರ್ಭದಲ್ಲಿ ಸುಧಾ ಚಂದ್ರನ್ ರವರು ಕಾಲನ್ನು ಮುಂದಕ್ಕೆ ಚಾಚಿದ್ದರು ಇದರಿಂದಾಗಿ ಅವರ ಕಾಲು ಸೀಟಿನ ಮಧ್ಯಕ್ಕೆ ಸಿಲುಕಿತ್ತು. ಬಸ್ ನಲ್ಲಿದ್ದ ಬಹಳಷ್ಟು ಪ್ರಯಾಣಿಕರು ಗಾಯಗೊಂಡಿದ್ದರು .
Bako sahakyan biography of barackಸ್ಥಳೀಯರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು . ಬಲಗಾಲು ತೀರ ಗಾಯಗೊಂಡಿತ್ತು . ವೈದ್ಯರು ಆಕೆಗೆ ಪ್ರಥಮ ಚಿಕಿತ್ಸೆಯನ್ನು ನೀಡಿದರು . ಕೆಲ ದಿನಗಳ ನಂತರ ಆಕೆಯ ಕಾಲು ಗ್ಯಾಂಗ್ರೀನ್ ಆಗಿದೆ ಎಂದು ತಿಳಿಯಿತು . ಕೂಡಲೆ ಕಾಲುಗಳನ್ನು ತುಂಡು ಮಾಡುವುದು ಸೂಕ್ತ ಅಥವಾ ಪ್ರಾಣಕ್ಕೆ ಅಪಾಯ ಎಂದು ವೈದ್ಯರು ಸಲಹೆ ನೀಡಿದರು. ಸಲಹೆಯ ಮೇರಿಗೆ ಆಕೆಯ ಕಾಲು ತುಂಡು ಮಾಡಲಾಯಿತು . ಕಾಲಿನ ಬದಲಾಗಿ ಮರದ ಕಾಲನ್ನು ಜೋಡಿಸಲಾಯಿತು .
ಮೊದಲಿನಲ್ಲಿ ಸುಧಾರವರು ಬೇಸತ್ತರು . ನಂತರ ಅಭ್ಯಾಸವಾಯಿತು . ದಿನನಿತ್ಯ ಜೀವನದಲ್ಲಿ ಹೊಂದುಕೊಂಡರು . ದಿನ ಕಳೆದಂತೆ ಆತ್ಮವಿಶ್ವಾಸವು ಬೆಳೆಯಿತು . ಮುಂದಿನ ಓದಿನಲ್ಲಿ ಆಸಕ್ತಿವಹಿಸಿದರು . ಅವರ ತಂದೆ ಆಕೆಗೆ ಬೆಂಬಲವಾಗಿದ್ದರು . ವೀಲ್ ಚೇರನ್ನು ಉಪಯೋಗಿಸಲು ಸೂಚಿಸಿದರು . ಇವರು ಅದಕ್ಕೆ ನಿರಾಕರಿಸಿದರು .
Wallace antitrinitarian biographyಮರಗಾಲಿನಲ್ಲಿಯೇ ನಡೆಯಲು ಪ್ರಾರಂಭಿಸಿದರು . ೬ ತಿಂಗಳ ನಂತರ ಸುಧಾ ಚಂದ್ರನ್ ರವರು ಮ್ಯಾಗಜಿನ್ ಓದುತ್ತಿರುವಾಗ ಡಾಕ್ಟರ್ ಸೆತ್ತಿ ಜೈಪುರ ಅವರ ಕೃತಕ ಕಾಲಿನ ಬಗ್ಗೆ ತಿಳಿದ ಸುಧಾ ಚಂದ್ರನ್ ಅವರ ಕಲಾ ಲೋಕಕ್ಕೆ ಬೆಳಕು ಚೆಲ್ಲಿದಂತಾಯಿತು .[೫][೬]
ಶಿಕ್ಷಣ
[ಬದಲಾಯಿಸಿ]ಸುಧಾ ರವರು ಮಿಥಿಬಾಯ್ ಕಾಲೇಜ್ ಮುಂಬೈನಲ್ಲಿ ಬಿ.ಎ ಮತ್ತು ಎಮ್.ಎ ಪದವಿಯನ್ನು ಪಡೆದರು.[೭]
ವೃತ್ತಿಜೀವನ
[ಬದಲಾಯಿಸಿ]ಸುಧಾ ರವರು ಮಯೂರಿ ಎಂಬ ತೆಲುಗು ಚಲನಚಿತ್ರದಿಂದ ತನ್ನ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು.
ಈ ಚಲನಚಿತ್ರವನ್ನು ತಮಿಳು , ಮಲೆಯಾಳಂ ಹಾಗೂ ಹಿಂದಿಯಲ್ಲಿ ನಾಚೆ ಮಯೂರಿ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು . ಈ ಚಿತ್ರದಲ್ಲಿ ಅಭಿನಯಿಸಿದ ಇವರಿಗೆ ೧೯೮೬ ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷವಾದ ಜ್ಯೂರಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು .
ಫಿಲ್ಮೋಗ್ರಾಫಿ
[ಬದಲಾಯಿಸಿ]ಪ್ರಶಸ್ತಿಗಳು
[ಬದಲಾಯಿಸಿ]- ನ್ಯಾಷನಲ್ ಫಿಲ್ಮ್ ಅವಾರ್ಡ್ / ಜ್ಯೂರಿ ಪ್ರಶಸ್ತಿ - ೧೯೮೬.
[೪೪]
- ಸ್ಟಾರ್ ಪರಿವಾರ್ ಅವಾರ್ಡ್ಸ್ - ೨೦೦೪. [೪೫]
- ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಇನ್ ನೆಗೆಟಿವ್ ರೋಲ್ - ೨೦೦೫.
- ಏಷಿಯನೆಟ್ ಟೆಲಿವಿಷನ್ ಅವಾರ್ಡ್ಸ್ - ೨೦೧೩.[೪೬]
- ವಿಜಯ್ ಟೆಲಿವಿಷನ್ ಅವಾರ್ಡ್ - ೨೦೧೪.[೪೭]
- ವಿಜಯ್ ಟೆಲಿವಿಷನ್ ಅವಾರ್ಡ್(ಬೆಸ್ಟ್ ಅತ್ತೆ) - ೨೦೧೫.
- ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್ - ೨೦೧೬.[೪೮]
- ಕಲರ್ಸ್ ಗೋಲ್ಡನ್ ಪೆಟಲ್ ಅವಾರ್ಡ್ಸ್(ಬೆಸ್ಟ್ ಕಾಮಿಕ್ ರೋಲ್) - ೨೦೧೭ .[೪೯]
ತೀರ್ಪುಗಾರರಾಗಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- http://freshinspirations.wordpress.com/2010/05/22/sudha-chandran-an-orgames-handicapped-dancer-and-actor/